Sunday, November 15, 2009

ನಮ್ಮ ಶಿವಣ್ಣ ಹಾಗು ಪ್ರಕಾಶಣ್ಣ ನವರ ಪುಸ್ತಕ ಬಿಡುಗಡೆ....

ನಮಸ್ತೆ


ಇಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮೂರು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಅಕ್ಷಯ ಪ್ರಕಾಶನದವರು ಹಮ್ಮಿಕೊಂಡಿದ್ದರು.. ಅದೇನೋ ಒಂದು ರೀತಿಯ ಕಂಡರಿಯದ ಸಂಭ್ರಮ ಸಡಗರ ಅಲ್ಲಿ ತುಂಬಿತ್ತು. ಬ್ಲಾಗ್ ಲೋಕದ ಮಿತ್ರರನೇಕರು ಅಲ್ಲಿ ನೆರೆದಿದ್ದರು. ಮೂರು ಪುಸ್ತಕಗಳಿಗೆ ಮುನ್ನುಡಿಯನ್ನು ಬರೆದವರೇ ಪುಸ್ತಕ ಬಿಡುಗಡೆ ಮಾಡಿದ್ದೂ ವಿಶೇಷ. ಪ್ರಕಾಶಣ್ಣನ " ಹೆಸರೇ ಬೇಡ" ಪುಸ್ತಕವನ್ನು ಪ್ರಸಿದ್ದ ಅಂಕಣಕಾರರಾದ ಶ್ರೀ ಜೀ.ಏನ್. ಮೋಹನ್ ರವರು, ಶಿವಣ್ಣನ " ವೆಂಡರ್ ಕಣ್ಣು" ಪುಸ್ತಕವನ್ನು ಶ್ರೀ ನಾಗೇಶ್ ಹೆಗ್ಡೆ ರವರು ಮತ್ತು ದಿವಾಕರ್ ಹೆಗ್ಡೆ ರವರ " ಉದ್ದಾರ -ಸಂತೆ" ಪುಸ್ತಕವನ್ನುಶ್ರೀ ಡಾ. ಬಿ.ವಿ. ರಾಜಾರಾಂ ರವರು ಬಿಡುಗಡೆ ಮಾಡಿ ಪುಸ್ತಕದ ಬಗ್ಗೆ ನಾಲ್ಕು ಮಾತನಾಡಿದರು.
ಪುಸ್ತಕಗಳ್ಳನ್ನು ಯಾರಾದರು ಲೇಖಕರೋ ಅಥವಾ ಸಾಹಿತಿಗಳೋ ಬರೆದಿದಲ್ಲಿ ಅಂತಹ ವಿಶೇಷವೇನು ಇರುತ್ತಿರಲ್ಲಿ. ಆದರೆ ನಾನು ಈಗ ಪರಿಚಯಿಸುತ್ತಿರುವ ಇಬ್ಬರು ವ್ಯಕ್ತಿಗಳು ನನಗೆ ಹಾಗು ನಮ್ಮೆಲರಿಗೆ ಸ್ಪೂರ್ತಿಯ ಚಿಲುಮೆಯನ್ನ ಚಿಮ್ಮುವಂಥಹವ್ಯಕ್ತಿತ್ವ ಉಳ್ಳವರು..
ಅವರ ಅನುಮತಿಯಿಲ್ಲದೆ ಅವರ ಬಗ್ಗೆ ಬರೆಯುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ.
ಮೊದಲಿಗೆ ಶಿವಣ್ಣನ ಬಗ್ಗೆ ಹೇಳ ಬಯಸುತ್ತೇನೆ:
ಒಬ್ಬ ದಿನಗೂಲಿ ನೌಕರನ ಮಗನಾಗಿ ಜನಿಸಿ, ಸಣ್ಣ ವಯಸ್ಸಿನಲ್ಲೇ ವಿದ್ಯಾಬ್ಯಾಸ ಮುಂದುವರಿಸುತ್ತ ಪೇಪರ್ ಹಾಕುವ ಹುಡುಗನಾಗಿ ದುಡಿಯಲು ಶುರು ಮಾಡಿ, ನಂತರ ಅದ್ದನ್ನೇ ವೃತ್ತಿಯನ್ನಾಗಿಸಿಕೊಂಡು ಇಂದು ಪೇಪರ್ ಏಜೆಂಟ್ ಆಗಿ, ಪ್ರವೃತ್ತಿಯಲ್ಲಿ ಅಂತಾರಾಷ್ಟ್ರೀಯ ಫೋಟೋಗ್ರಾಫ್ ಆಗಿ ಖ್ಯಾತಿಗಳಿಸಿರುವ, ಹಲವಾರು ಪತ್ರಿಕೆಗಳಿಗೆ ಚಿತ್ರ ಲೇಖನ ಗಳ್ಳನ್ನು ಬರೆದಿರುವ ಇವರು, ಇಂದು ನಮ್ಮ ಮುಂದೆ ಒಂದು ಪುಸ್ತಕದ ಕರ್ತೃಗಳಾಗಿ ನಿಲ್ಲುತ್ತಿರುವುದೇ ಒಂದು ಅವಿಸ್ಮರಣೀಯ ವಿಷಯ. ಸಾಮಾನ್ಯವಾಗಿ ತಾವು ಬರೆಯುವ ಪುಸ್ತಕ ಗಳ್ಳನ್ನ ತಮ್ಮ ಹೆಂಡತಿಗೋ, ಮಕ್ಕಳಿಗೋ, ತಂದೆ- ತಾಯಿಯವರಿಗೋ ಅರ್ಪಿಸುವುದು ಸರ್ವೇ ಸಾಮಾನ್ಯ, ಆದರೆ ನಮ್ಮ ಶಿವಣ್ಣ ತಾನು ಬರೆದ ಪುಸ್ತಕವನ್ನು ಅರ್ಪಿಸಿರುವುದ್ದನ್ನು ನೀವು ತಿಳಿದರೆ ಅವರ ವ್ಯಕ್ತಿತ್ವ ಎಂಥವುದೆಂದು ತಿಳಿಯುತ್ತದೆ.
ಚಳಿ, ಗಾಳಿ, ಮಳೆ ಎನ್ನದೇ...
ತಣ್ಣನೆ ಮುಂಜಾವಿನಲ್ಲಿ.....
ಬೆಚ್ಚನೆಯ ಬೆಳಗು ತರುವ...
ಅಸಂಖ್ಯಾತ, ಅನಾಮಿಕ...
ದಿನಪತ್ರಿಕೆ ಹಂಚುವ....
ಹುಡುಗರಿಗೆ....
ಅವರ ಲೇಖನಗಳ್ಳನ್ನು ಓದಲು ಅವರ ಬ್ಲಾಗ್ ಹೊಕ್ಕಿ ನೋಡಿ: http://chaayakannadi.blogspot.com/

ಎರಡನೆಯದಾಗಿ ಪ್ರಕಾಶಣ್ಣನ ಬಗ್ಗೆ ಹೇಳ ಬಯಸುತ್ತೇನೆ:
ಇಟ್ಟಿಗೆ- ಸಿಮೆಂಟ್ ಖ್ಯಾತಿಯ ಪ್ರಕಾಶಣ್ಣ ವೃತ್ತಿಯಲ್ಲಿ ಒಬ್ಬ ಸಿವಿಲ್ ಇಂಜಿನಿಯರ್. ಆವರು ತಮ್ಮ ಬ್ಲಾಗ್ನಲ್ಲಿ ಬರೆಯುತಿದ್ದ ಲೇಖನಗಳ್ಳನ್ನು ಒಟ್ಟು ಗೂಡಿಸಿ ಹೊರ ತಂದಿರುವ ಹಾಸ್ಯ ಭರಿತ ಪುಸ್ತಕವೇ "ಹೆಸರೇ ಬೇಡ". ಅವರ ಬ್ಲಾಗ್ ವಿಳಾಸ : http://ittigecement.blogspot.com/


ಡಾ. ಬಿ. ವಿ. ರಾಜರಾಮ್ ರೊಂದಿಗೆ...
ಎಡದಿಂದ ಬಲಕ್ಕೆ: ಶಿವಣ್ಣ, ಜೀ.ಏನ್.ಮೋಹನ್, ಡಾ.ಬಿ.ವಿ.ರಾಜಾರಾಂ, ನಾಗೇಶ್ ಹೆಗ್ಡೆ, ಯಶವಂತ್ ಸರ್ದೇಶ್ ಪಾಂಡೆ, ದಿವಾಕರ್ ಹೆಗ್ಡೆ, ಸೀತಾರಾಮ ಹೆಗ್ಡೆ ಹಾಗು ಪ್ರಕಾಶಣ್ಣ.

ವಂದೇ ಮಾತರಂ


Sunday, October 11, 2009

ಮನವಿ

ನಮಸ್ತೆ

ಪ್ರಿಯ ಸ್ನೇಹಿತರೆ... ನಾನಿಲ್ಲಿ ಪ್ರಸ್ತಾಪಿಸುತ್ತಿರುವ ವಿಷಯ ಹೊಸದೇನಲ್ಲ.... ಪ್ರಕೃತಿಯ ವಿಕೋಪಕ್ಕೆ( ಮನುಷ್ಯನ ಅಟ್ಟಹಾಸಕ್ಕೆ) ಸಿಲುಕಿ ನೆರೆಯ ಕಾರಣದಿಂದಾಗಿ ನಮ್ಮ ನಾಡಿನ (ಉತ್ತರ ಕರ್ನಾಟಕದ) ಅನೇಕ ಜೀವಗಳು ನರಳುತ್ತಿವೆ... ಅವರಿಗೆ ನೆರೆಯು ಹೊರೆಯಾಗದಂತೆ ನೋಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಅದಮ್ಯ ಕರ್ತವ್ಯ.. ದಯವಿಟ್ಟು ನಿಮಗೆ ಸರಿಯೆನಿಸಿದ ದಾರಿಯಲ್ಲಿ ಸೇವೆಯನ್ನ ಸಲ್ಲಿಸ ಬೇಕಾಗಿ ವಿನಂತಿ..

ಹಾಗೆಯೇ ಈ ವರ್ಷದ ಬೆಳಕಿನ ಹಬ್ಬ ದೀಪಾವಳಿಯನ್ನ ಸರಳವಾಗಿ ಆಚರಿಸಿ ಅನೇಕರ ಬಾಳಿಗೆ ಬೆಳಕಾಗ ಬೇಕಾಗಿ ಕೋರುತ್ತೇನೆ...













ವಂದೇ ಮಾತರಂ



Wednesday, September 23, 2009

ಹಣತೆ ೨೦೦೯ (೨೦-೨೧ ಸೆಪ್ಟೆಂಬರ್)

ನಮಸ್ತೆ
ಮೊನ್ನೆ ಭಾನುವಾರ ಮತ್ತು ಸೋಮವಾರ ವಿವೇಕ ಹಂಸ ಬಳಗ ನಡೆಸಿದ " ಸಾಂಸ್ಕೃತಿಕ- ಆಧ್ಯಾತ್ಮಿಕ- ವ್ಯಕ್ತಿತ್ವ ವಿಕಸನ" ಶಿಬಿರದಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳು ನಿಮಗಾಗಿ ...



ದ್ವಿತ್ರಯರು

ರಾಮಕ್ರಿಷಣ ಮಠದ ಅದ್ಯಕ್ಷರಾದ ಹರ್ಷನಂದ್ ಜೀ ಮಹಾರಾಜರಿಂದ ಚಾಲನೆ


"ಭಜಗೋವಿಂದಂ"-ಶ್ರೀ ಹರ್ಷಾನಂದ ಜೀ ಮಹಾರಾಜ್

"ದೂರದಿರಿ ಬದುಕ, ಬೆದಕರಿ ನಸುಕ"- ಶ್ರೀ ರಘೋತ್ತಮ ರಾವ್


" ಕಲಾಯೋಗ"- ಶ್ರೀ ಶತಾವಧಾನಿ ಗಣೇಶ್

"ಸದೃಢ ವ್ಯಕ್ತಿತ್ವ- ಸುಂದರ ಮನಸ್ಸು": ಡಾ. ಸಿ. ಅರ್ . ಸಿ

" ಜೀವಸಾಗರದ ಬಿಂದು, ಒಳಗನಂತ ಸಿಂಧು": ಶ್ರೀ ಗುರುರಾಜ್ ಕರಜಗಿ

"ಕಲಿಯುಗದ ಜೀವನ ಕಲೆ": ಶ್ರೀ ಬಸವರಾಜ್ ಪಾಟೀಲ್ ಸೇಡಂ

"ವಿವೇಕಾನಂದ ನಮಗಾನಂದ" : ಶ್ರೀ ಚಕ್ರವರ್ತಿ ಸೂಲಿಬೆಲೆ

"ನಗುನಗುತಾ ಬಾಳ್ ": ಶ್ರೀ ಮಾಸ್ಟರ್ ಹೀರಣಯ್ಯ


"ಭಕ್ತಿ ಕುಸುಮಾಂಜಲಿ": ಶ್ರೀಮತಿ ಎಂ. ಡಿ. ಪಲ್ಲವಿ


"ಜಾಗೋ ಭಾರತ್ ತಂಡದಿಂದ ದೇಶ ಭಕ್ತಿ ಗೀತೆಗಳ ಗಾಯನ"
"ಸಾರೆ ಜಹಂಸೆ ಅಚ್ಚ...." ಹಾಡಿಗೆ ಕೈ ಜೋಡಿಸಿದ ಕಂದಮ್ಮ

ವಂದೇ ಮಾತರಂ



Monday, September 14, 2009

ಶ್ರೀ ಸರ್. ಎಂ.ವಿ (೧೫-೦೯- ೧೮೬೦ ರಿಂದ ೧೪-೦೪-೧೯೬೨)

ನಮಸ್ತೆ

ನವ ಕರ್ನಾಟಕದ ಕರ್ತೃ ಭಾರತ ರತ್ನ ಪೂಜ್ಯನಿಯ ಶ್ರೀ ಮೋಕ್ಷಗುಂಡಂ ವಿಶ್ವೇಶ್ವರಯ್ಯ ನವರಿಗೆ ಹುಟ್ಟು ಹಬ್ಬದ ಶುಭಾಶಯಗಳು.
ತಮ್ಮ ಅಮೋಘ ಬುದ್ದಿಮತ್ತೆಯಿಂದ ರಾಷ್ಟ್ರದ ಚಿತ್ರವನ್ನೇ ಬದಲಿಸಿದ ಕರ್ನಾಟಕದ ಹೆಮ್ಮೆಯೇ ಪುತ್ರ ಸರ್.ಎಂ.ವಿ ಯವರಿಗೆ ಅನಂತ ಕೋಟಿ ವಂದನೆಗಳು.... ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿ ರಾಷ್ಟ್ರಸೇವೆಗೆ ತನ್ನನ್ನೇ ಅರ್ಪಿಸಿಕೊಂಡ ಮಹಾನುಭಾವನಿಗೆ ಜೈ ಹೋ...

ಸರ್.ಎಂ.ವಿ ಯವರ ಬಗ್ಗೆ ಸಂಕ್ಷಿಪ್ತ ವಿವರ:

ತಂದೆ-ತಾಯಿ: ಶ್ರೀ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಾಚಮ್ಮ
ಹುಟ್ಟಿದ ಊರು: ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ.
ವಿದ್ಯಾಬ್ಯಾಸ: ಪ್ರಾಥಮಿಕ ಶಿಕ್ಷಣ- ಮುದ್ದೇನಹಳ್ಳಿ
ಪ್ರೌಢ ಶಿಕ್ಷಣ- ಬೆಂಗಳೂರು
ಬಿ.ಎ ಪದವಿ- ಮದ್ರಾಸ್ ವಿಶ್ವವಿದ್ಯಾಲಯ
ಬಿ.ಇ ಪದವಿ- ಸಿವಿಲ್ ಇಂಜಿನಿಯರಿಂಗ್, ಕಾಲೇಜ್ ಆಫ್ ಸೈನ್ಸ್, ಪೂಣೆ.
ನಿರ್ವಹಿಸಿದ ಜವಾಬ್ದಾರಿಗಳು: p.w.d ಇಂಜಿನಿಯರ್, ಮುಂಬೈ ( ಅಂದಿನ ಬೊಂಬಾಯಿ)
ದಿವಾನ್ ಆಫ್ ಮೈಸೂರ್. ಮತ್ತು ಹಲವಾರು...
ಪ್ರಮುಖ ಪ್ರಶಸ್ತಿಗಳು: The Knight Commander of The Indian Empire medal by British Emperors,
ಭಾರತ ರತ್ನ ಪ್ರಶಸ್ತಿ ೧೯೫೫.

ಅವರ ಸಾಧನೆಯನ್ನ ಗುರುತಿಸಿ ಅವರ ಜನ್ಮ ದಿನವನ್ನ "ಇಂಜಿನಿಯರ್'ಸ ಡೇ" ಎಂದು ಭಾರತ ಸರ್ಕಾರ ಘೋಷಿಸಿದೆ...

ಎಲ್ಲ ಅಭಿಯಂತರರಿಗೂ "ಇಂಜಿನಿಯರ್'ಸ ಡೇ" ಶುಭಾಶಯಗಳು....

ವಂದೇ ಮಾತರಂ...

Saturday, September 5, 2009

ಬ್ರಹ್ಮ+ವಿಷ್ಣು+ಮಹೇಶ್ವರ= ಗುರುವರ್ಯ

ನಮಸ್ತೆ
" ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಾಯ
ಚಕ್ಷುರುನಿರ್ಮಿಲಿತಂ ಏನ್ ತಸ್ಮೈ ಶ್ರೀ ಗುರುವೇ ನಮಃ"
ಅರ್ಥ : ಅಜ್ಞಾನದ ಕತ್ತಲಿನಿಂದ ಕುರುಡಾಗಿದ್ದವನ ಕಣ್ಣನ್ನು ಜ್ಞಾನವೆಂಬ ದೀಪದಿಂದ ತೆರೆಸಿದ ಗುರುವಿಗೆ ಪ್ರಣಾಮಗಳು.

ಗುರಿ ಇರ ಬೇಕು ಮುಂದೆ ಗುರು ಇರಬೇಕು ಹಿಂದೆ ಎಂಬ ಮಾತು ಎಷ್ಟು ಸತ್ಯವಲ್ಲವೇ.... ಈ ದಡ್ಡನಿಗೆ ವಿದ್ಯಾದಾನ ಮಾಡಿದ ಎಲ್ಲ ಶಿಕ್ಷಕರಿಗೆ ಅನಂಥಕೋಟಿ ನಮಸ್ಕಾರಗಳು ಹಾಗು ಶಿಕ್ಷರ ದಿನಾಚರಣೆಯ ಶುಭಾಶಯಗಳು .ಇಂದು ನಾನೇನಾದರೂ ಸಾದಿಸಿದ್ದರೆ ಅದಕ್ಕೆ ಕಾರಣ ನನ್ನ ಶಿಕ್ಷಕರು. ಪ್ರತಿ ಹಂತದಲ್ಲೂ ನನ್ನನ್ನು ಪ್ರೋತ್ಸಾಹಿಸಿ ತೀಡಿ ತಿದ್ದಿದಂತಹ ನನ್ನ ಶಿಕ್ಷಕರನ್ನು ನೆನಪು ಮಾಡಿಕೊಳ್ಳುವುದು ನನ್ನ ಅದಮ್ಯ ಕರ್ತವ್ಯ.
ಜೊತೆಗೆ ಶಿಕ್ಷಕ ವೃತ್ತಿಯನ್ನು ಕೀಳಾಗಿ ಕಾಣುವ ಜನೆರೆಡೆಗೆ ಒಂದು ಸಹಾನುಭೂತಿಯನ್ನು ವ್ಯಕ್ತಪಡಿಸುತ್ತ ಈ ಲೇಖನವನ್ನು ಮುಗಿಸುತ್ತೇನೆ.

ಶ್ರೀ ಪುಜ್ಯನಿಯ ಸರ್ವೆಪಲ್ಲಿ ರಾಧಾಕೃಷ್ಣನ್




ವಂದೇ ಮಾತರಂ...

Sunday, August 16, 2009

ಜನನಿ ಜನ್ಮ ಭೂಮಿಶ್ಚ್ಯ, ಸ್ವರ್ಗಾದಪಿ ಗರಿಯೇಸಿ...

ನಮಸ್ತೆ
ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ಆಗಸ್ಟ್ ೧೫ ಎಂದರೆ ನನ್ನ ಮನಸ್ಸು ರೋಮಾಂಚನಗೊಳ್ಳುತ್ತದೆ .ಶಾಲಾ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳುತಿದ್ದ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳುತಿದ್ದೆ. ಶಾಲೆ ಬಿಟ್ಟ ನಂತರ ಪ್ರತಿ ವರ್ಷವೂ ಯಾವುದಾದರು ಶಾಲಾ ಕಾರ್ಯಕ್ರಮದಲ್ಲಿ ಮೂಕ ವೀಕ್ಷಕನಾಗಿ ಭಾಗವಹಿಸಿ ನನ್ನ ಬಾಲ್ಯದ ದಿನಗಳ ಸವಿ ಸವಿ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದೆ.

ಆದರೆ ಈ ಬಾರಿ ಉದ್ಯೋಗ ಗಳಿಸಿದ ನಂತರದ ಮೊದಲ ಸ್ವಾತಂತ್ರ್ಯ ದಿನಾಚರಣೆಯದ್ದರಿಂದ ಏನಾದರೂ ಹೊಸದಾಗಿ ಮಾಡಬೇಕೆನಿಸಿತು. ಆದರಿಂದ ನನಗೆ ಅ ಆ ಇ ಈ ಕಲಿಸಿದ ನಮ್ಮೂರ ಶಾಲೆಯಲ್ಲಿ ಆಚರಿಸಬೇಕೆಂದು ನಿಶ್ಚಯಿಸಿ ಮಕ್ಕಳ ಸಂಖ್ಯೆ ತಿಳಿಯಲು ಶಾಲಾ ಮುಖ್ಯಶಿಕ್ಷಕಿಯವರಿಗೆ ಫೋನಾಯಿಸಿದಾಗ ಅವರು ನನ್ನನ್ನೇ ವಿಶೇಷ ಅತಿಥಿಯನ್ನಾಗಿ ಆಹ್ವಾನಿಸಿದರು ( ಅದಕ್ಕೆ ಕಾರಣ ನಮ್ಮ ಅಜ್ಜನವರು ಆ ಶಾಲೆಯ ಹೇಳಿಗೆಗೆ ಬಹಳಷ್ಟು ಶ್ರಮಿಸಿದ್ದಾರೆ). ಕಳೆದ ಶ್ಯೆಕ್ಷಣಿಕ ವರ್ಷದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ಹೇಳಿ ಫೋನ್ ಇಟ್ಟೆ. ವಾರದ ಹಿಂದೆಯ ಕೊಡಬೇಕಾದ ಬಹುಮಾನಗಳನ್ನು ಹಾಗು ಶಾಲೆಯ ಆಷ್ಟು ಮಕ್ಕಳಿಗೆ ಲೇಖನ ಸಾಮಗ್ರಿಗಳನ್ನು ಕರಿದಿಸಿ ಇಟ್ಟು ಕೊಂಡೆ.

ಇಂದು ಬೆಳ್ಳಗೆ ೮:೦೦ ಗಂಟೆಗೆ ದ್ವಜರೋಹಣ ಕಾರ್ಯಕ್ರಮವಿತ್ತು. ನೆನ್ನೆ ಸುರಿದ ದಾರಕರ ಮಳೆಯಿಂದಾಗಿ ಮಕ್ಕಳು ಮಾಡಿಕೊಂಡಿದ್ದ ಸಕಲ ಸಿದ್ದತೆಗಳು ನೀರುಪಾಲಗಿದ್ದವು. ಆದರೂ ಸಹ ಕಂಗೆಡದೇ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಸಿದ್ದವಾಗಿದ್ದರು. ಸರಳವಾಗಿ ಸರಾಗವಾಗಿ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಬಹುಮಾನ ವಿತರಿಸಿ ಅವರೊಂದಿಗೆ ಪ್ರಭಾತ್ ಫೇರಿಯಲ್ಲಿ ಭಾಗವಹಿಸಿ ಮನೆಗೆ ಹಿಂದಿರುಗಿದಾಗ ಏನೋ ಕಂಡರಿಯದ ಖುಷಿಯಲ್ಲಿ ಮನಸ್ಸು ತೇಲುತಿತ್ತು..

ಅಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳು...
ವಂದೇ ಮಾತರಂ...